ಪುಂಡಿ ಪಣವು | 15 12 2024
ಪುಂಡಿ ಪಣವು | 15 12 2024
ನೀರುಮಾರ್ಗ ಪೆದಮಲೆ ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನದಲ್ಲಿ ಜೀರ್ಣೋದ್ದಾರ ಅಂಗವಾಗಿ ವಿದ್ವಾನ್ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಮುಷ್ಟಿ ಕಾಣಿಕೆ ಮತ್ತು ಪ್ರಾಯಶ್ಚಿತ ದುರ್ಗಾಹೋಮ ಭಾನುವಾರ 15-12-2024ರಂದು ನಡೆಯಿತು.
700ಕ್ಕೂ ವರ್ಷಗಳಿಂದ ಹಿಂದಿನ ದೈವಸ್ಥಾನ ಇದಾಗಿದ್ದು, ಕುಡುಪು, ಪೆದಮಲೆ, ಸರಿಪಲ್ಲ, ಕುಲಶೇಖರ, ನೀರುಮಾರ್ಗ, ನೆಕ್ಕರೆಪದವು, ಮಾಣೂರು, ಕೆಲರಾಯ್, ಪಾಲ್ವಾನೆ, ಜ್ಯೋತಿ ನಗರ, ಸಿಲ್ವರ್ಗೇಟ್, ಕೋಟಿಮುರ ಗ್ರಾಮಗಳು ದೈವಸ್ಥಾನದ ವ್ಯಾಪ್ತಿಯಲ್ಲಿವೆ. ಬೆಳಗ್ಗೆ ಗಣಹೋಮ, ಮುಷ್ಟಿ ಕಾಣಿಕೆ ಆರಂಭವಾಯಿತು. ಬೆಳಗ್ಗೆ ಸಪ್ತಶತಿ ಪಾರಾಯಣ, ದುರ್ಗಾಹೋಮ, ಮಹಾಪೂಜೆ ನಡೆಯಿತು.
ಮುಷ್ಟಿಕಾಣಿಕೆ ಸಮಾಪನ ನಡೆದ ಬಳಿಕ ಅನ್ನಸಂತರ್ಪಣೆ ನೆರವೇರಿತು.
ಶಾಸಕರಾದ ಡಾ.ಭರತ್ ವೈ.ಶೆಟ್ಟಿ, ವೇದವ್ಯಾಸ ಕಾಮತ್, ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮನೋಜ್ ಸರಿಪಲ್ಲ, ಟ್ರಸ್ಟ್ ಅಧ್ಯಕ್ಷ ಗಿರಿಧರ್ ಶೆಟ್ಟಿ, ಕಾರ್ಯಾಧ್ಯಕ್ಷ ಆನಂದ್ ಸರಿಪಲ್ಲ, ಗೌರವಾಧ್ಯಕ್ಷರಾದ ಭಾಸ್ಕರ್ ಕೆ., ಲೀಲಾವತಿ ಭಟ್, ತಲಪಾಡಿ ದೊಡ್ಡಮನೆ ಜಯಪಾಲ್ ಶೆಟ್ಟಿ ಉಪಸ್ಥಿತರಿದ್ದರು.